ಬೆಳಗಾವಿ ನಗರದಲ್ಲಿ ಕಲ್ಲು ತೂರಾಟ... ಬಿಗುವಿನ ವಾತಾವರಣ

Hero Image
Newspoint

ಬೆಳಗಾವಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಶನಿವಾರ ಅ. 5ರಂದು ಬೆಳಗಾವಿ ನಗರಕ್ಕೆ ಆಗಮಿಸುತ್ತಿರುವ ಬೆನ್ನಲ್ಲೇ ನಗರದ ಖಡಕ್ ಗಲ್ಲಿಯಲ್ಲಿ ಎರಡು ಕೋಮಿನ ಯುವಕರ ಮಧ್ಯೆ ಶುಕ್ರವಾರ ರಾತ್ರಿ ಕಲ್ಲು ತೂರಾಟ ನಡೆದಿದೆ. ಕೆಲ ಪುಂಡರು ತಲ್ವಾರ್ ಪ್ರದರ್ಶಿಸಿದ್ದು ಆತಂಕಕ್ಕೆ ಕಾರಣವಾಗಿದೆ.

ಕಾಕತಿ ವೇಸ್ ನಲ್ಲಿ ನಡೆಯುತ್ತಿರುವ ಮಹಾಬೂಬ್ ಸುಬಾನಿ ದರ್ಗಾ ಉರುಸ್ ಹಿನ್ನೆಲೆಯಲ್ಲಿ ಕೆಲ ಯುವಕರು ತಮ್ಮ ಧರ್ಮದ ಧ್ವಜಗಳನ್ನು ಹಿಡಿದುಕೊಂಡು ಹೊರಟಿದ್ದರು. ಐ ಲವ್ ಮೊಹಮ್ಮದ್ ಎಂಬ ಘೋಷಣೆ ಕೂಗಿದ್ದಾರೆ. ಈ ವೇಳೆ ಇನ್ನೊಂದು ಕೋಮಿನ ಯುವಕರು ಪ್ರಶ್ನಿಸಿದ್ದಾರೆ. ಆಗ ಇಬ್ಬರ ಮಧ್ಯೆ ಜಗಳವಾಗಿದೆ. ನಂತರ ಗುಂಪು ಕಟ್ಟಿಕೊಂಡು ಬಂದು ಗಲಾಟೆ ಮಾಡಿ ಕಲ್ಲು ತೂರಾಟ ನಡೆಸಿದ್ದಾರೆ.

ಖಡಕ್ ಗಲ್ಲಿಯ ಸರ್ಕಲ್ ನಲ್ಲಿಯೇ ಕಲ್ಲು ತೂರಾಟವಾಗಿದೆ ಕೆಲವರ ಮನೆ ಮೇಲೆ ಕಲ್ಲುಗಳು ಬಿದ್ದಿವೆ. ಈ ವೇಳೆ ಸ್ಥಳಕ್ಕೆ ಪೊಲೀಸರು ಬಂದು ಪರಿಸ್ಥಿತಿ ನಿಯಂತ್ರಿಸಲು ಯತ್ನಿಸಿದ್ದಾರೆ. ಆದರೂ ಕೆಲವು ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದಾರೆ. ನಂತರ ಪೊಲೀಸರು ಎಲ್ಲರನ್ನೂ ಚದುರಿಸಿದ್ದಾರೆ.

ಪ್ರತಿ ವರ್ಷ ಶನಿವಾರ ಕೂಟ, ಜಾಲಗಾರ ಗಲ್ಲಿ, ಕಾಕಯಿ ವೇಸ್ ನಲ್ಲಿ ದರ್ಗಾದ ಉರುಸ್ ನಡೆಯುತ್ತದೆ.  ಮೆರವಣಿಗೆ ಖಡಕ್ ಗಲ್ಲಿಗೆ ಬಂದಾಗ ಐ ಲವ್ ಮೊಹಮ್ಮದ್ ಎಂಬ ಘೋಷಣೆ ಕೂಗಿದ್ದಾರೆ. ಈ ವರ್ಷ ನಮ್ಮ ಗಲ್ಲಿಗೆ ಏಕೆ ಬಂದಿದ್ದೀರಿ ಎಂದು ಜನರು ಪ್ರಶ್ನಿಸಿದ್ದಾರೆ. ಆಗ ಅನ್ಯ ಕೋಮಿನ ಯುವಕರು ಪುಂಡಾಟಿಕೆ ನಡೆಸಿದ್ದಾರೆ.

 ಸ್ಥಳಕ್ಕೆ ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ನಾರಾಯಣ ಭರಮನಿ ಆಗಮಿಸಿ ಸ್ಥಳೀಯರನ್ನು ಸಮಾಧಾನಪಡಿಸಿದ್ದಾರೆ. ರಾತ್ರಿ ಹೊತ್ತು ಎರಡು ಕೋಮುವಿನ ಯುವಕರನ್ನು ಮನವೊಲಿಸಿ, ಮನೆಗೆ ಕಳುಹಿಸಿದ್ದಾರೆ.

ಸ್ಥಳದಲ್ಲಿ ಪ್ರಕ್ಷುಬ್ಧ ವಾತಾವರಣ  ನಿರ್ಮಾಣವಾಗಿದೆ.  ಹೆಚ್ಚಿನ ಪೊಲೀಸ್ ಬಂದೋಬ ನಿಯೋಜಿಸಲಾಗಿದೆ.