Women's Hockey: ವನಿತಾ ಹಾಕಿ 'ಎ' ತಂಡದ ಚೀನ ಪ್ರವಾಸ
ಹೊಸದಿಲ್ಲಿ: ಭಾರತೀಯ ವನಿತಾ ಹಾಕಿ ‘ಎ’ ತಂಡ ಅ. 13ರಿಂದ 21ರ ತನಕ 5 ಪಂದ್ಯಗಳ ಸರಣಿಗಾಗಿ ಚೀನ ಪ್ರವಾಸ ಕೈಗೊಳ್ಳಲಿದೆ. ಎಲ್ಲ ಪಂದ್ಯಗಳನ್ನು ಡಾಲಿಯನ್’ನ ‘ಲಿಯೋನಿಂಗ್ ಸ್ಪೋಟ್ರ್ಸ ಸೆಂಟರ್’ನಲ್ಲಿ ಆಡಲಾಗುವುದು.
ಈ ಎಂಟು ದಿನಗಳ ಅವಧಿಯಲ್ಲಿ ಭಾರತ ‘ಎ’ ತಂಡ ‘ಲಿಯೋನಿಂಗ್’ ತಂಡದ ವಿರುದ್ಧ ಆಡಲಿದೆ. ತಂಡದಲ್ಲಿ ಸಾಕಷ್ಟು ಅನುಭವಿ ಆಟಗಾರರು ತುಂಬಿದ್ದು, ಸೀನಿಯರ್ ಹಂತದ ಆಟಕ್ಕೆ ಇದು ಬಹಳಷ್ಟು ಪ್ರಯೋಜನವಾಗಲಿದೆ ಎಂದು ಅಭಿಪ್ರಾಯಪಡಲಾಗಿದೆ.
Next Story