ವಿಶ್ವ ಚಾಂಪಿಯನ್ಶಿಪ್: ಮೀರಾಬಾಯಿಗೆ ಬೆಳ್ಳಿ

Hero Image
Newspoint

ಫೋರ್ಡ್ (ನಾರ್ವೆ): ವಿಶ್ವ ಚಾಂಪಿಯನ್ಶಿಪ್ ವೇಟ್ಲಿಫ್ಟಿಂಗ್ ಸ್ಪರ್ಧೆಯಲ್ಲಿ ಒಲಿಂಪಿಕ್ಸ್ ಪದಕ ವಿಜೇತ ಭಾರತದ ಲಿಫ್ಟರ್ ಮೀರಾಬಾಯಿ ಚಾನು ಬೆಳ್ಳಿ ಪದಕ ಜಯಿಸಿದ್ದಾರೆ.  

ವನಿತೆಯರ 48 ಕೆಜಿ ವಿಭಾಗದಲ್ಲಿ ಅವರು ಒಟ್ಟು 199 ಕೆಜಿ ಭಾರವೆತ್ತಿ ದ್ವಿತೀಯ ಸ್ಥಾನಿಯಾದರು (ಸ್ಲ್ಯಾಚ್ 84 ಕೆಜಿ, ಕ್ಲೀನ್ ಆ್ಯಂಡ್ ಜರ್ಕ್ 115 ಕೆಜಿ).

2017ರ ವಿಶ್ವ ಚಾಂಪಿಯನ್ ಹಾಗೂ 2022ರ ಆವೃತ್ತಿಯ ಬೆಳ್ಳಿ ಪದಕ ವಿಜೇತೆ ಮೀರಾಬಾಯಿ, ಸ್ಲ್ಯಾಚ್ನಲ್ಲಿ 2 ಸಲ ವಿಫಲರಾದರು. ಆದರೆ ಕ್ಲೀನ್ ಆ್ಯಂಡ್ ಜರ್ಕ್ನಲ್ಲಿ ಲಯ ಕಾಣುವಲ್ಲಿ ಯಶಸ್ವಿಯಾದರು. ಇಲ್ಲಿ ಮಾಜಿ ವಿಶ್ವ ಚಾಂಪಿಯನ್ ಆಗಿರುವ ಮೀರಾಬಾಯಿ, 2021ರ ಟೋಕಿಯೊ ಒಲಿಂಪಿಕ್ಸ್ನಲ್ಲೂ 115 ಕೆಜಿ ಭಾರವೆತ್ತಿ ಬೆಳ್ಳಿ ಜಯಿಸಿದ್ದರು.

ಶುಕ್ರವಾರದ ಸ್ಪರ್ಧೆಯಲ್ಲಿ ಉತ್ತರ ಕೊರಿಯಾದ ರಿ ಸಾಂಗ್ ಗಮ್ ಚಿನ್ನ ಗೆದ್ದರು. ಅವರು ಒಟ್ಟು 213 ಕೆಜಿ ತೂಕ ಎತ್ತಿ ವಿಶ್ವದಾಖಲೆ ಸ್ಥಾಪಿಸಿದರು (91 ಪ್ಲಸ್ 122 ಕೆಜಿ). ಕ್ಲೀನ್ ಆ್ಯಂಡ್ ಜರ್ಕ್ನಲ್ಲೂ ಗಮ್ ಅವರಿಂದ ವಿಶ್ವದಾಖಲೆ ನಿರ್ಮಾಣಗೊಂಡಿತು. ಥಾಯ್ಲೆಂಡ್ನ ತನ್ಯಥೋಮ್ ಸುಖರೋನ್ ಕಂಚು ಪಡೆದರು (198 ಕೆಜಿ).