ನೀಟ್, ಜೆಇಇ ಪರೀಕ್ಷೆ: ಕೋಚಿಂಗ್ ಅವಲಂಬನೆ ತಗ್ಗಿಸಲು ಕೇಂದ್ರ ಚಿಂತನೆ
ಹೊಸದಿಲ್ಲಿ: ಜೆಇಇ, ನೀಟ್ನಂತಹ ಪ್ರವೇಶಾತಿ ಪರೀಕ್ಷೆಗಳ ಕಠಿನತೆಯ ಮಟ್ಟವನ್ನು ಪರಿಶೀಲಿಸಲು ಕೇಂದ್ರ ಸರಕಾರವು 9 ಸದಸ್ಯರ ಸಮಿತಿ ರಚಿಸಿದೆ. ಪ್ರವೇಶಾತಿ ಪರೀಕ್ಷೆಗಳು ಕಠಿನವಾಗಿರುವುದರಿಂದ ವಿದ್ಯಾರ್ಥಿಗಳು ಕೋಚಿಂಗ್ ಕೇಂದ್ರಗಳ ಮೊರೆ ಹೋಗುವಂತಾಗಿದೆ ಎಂಬ ಅಭಿಪ್ರಾಯಗಳ ಹಿನ್ನೆಲೆ, ಪರೀಕ್ಷೆಯ ಪಠ್ಯಕ್ರಮವನ್ನು ಶಾಲಾ ಮಟ್ಟದ ಪಠ್ಯಕ್ರಮಕ್ಕೆ ಸರಿದೂ ಗಿಸಬಹುದೇ ಎಂದು ಈ ಸಮಿತಿಯು ಪರಿಶೀಲಿಸುತ್ತಿದೆ.
ಈ ಮಾರ್ಗಗಳ ಮೂಲಕ ಮಕ್ಕಳು ಕೋಚಿಂಗ್ ಕೇಂದ್ರಗಳಲ್ಲಿಯೂ ಕಲಿಯಬೇಕಾದ ಅನಿರ್ವಾಯತೆಯನ್ನು ತಪ್ಪಿಸಲು ಮುಂದಾಗಿದೆ. ದಾರಿ ತಪ್ಪಿಸುವಂತಹ ಕೋಚಿಂಗ್ ಕೇಂದ್ರಗಳ ಜಾಹಿರಾತು ನಿಯಂತ್ರಣ, ವರ್ಷದಲ್ಲಿ ಹಲವು ಬಾರಿ ಪ್ರವೇಶಾತಿ ಪರೀಕ್ಷೆ ನಡೆಸುವುದಕ್ಕೂ ಸಲಹೆ ನೀಡಿದೆ. ಪರೀಕ್ಷೆಯು ಕಂಪ್ಯೂಟರ್ ಆಧಾರಿತವಾಗಿ ನಡೆಸಬೇಕೆ ಎಂದು ಪರಿಶೀಲಿಸುತ್ತಿದೆ.
Next Story