ಬಿಹಾರ: ವಂದೇ ಭಾರತ್ ರೈಲು ಢಿಕ್ಕಿ ಹೊಡೆದು ನಾಲ್ವರು ಸಾವು
ಪಟ್ನಾ: ವಂದೇ ಭಾರತ್ ರೈಲು ಢಿಕ್ಕಿ ಹೊಡೆದ ಪರಿಣಾಮ ನಾಲ್ವರು ಸ್ಥಳದಲ್ಲೇ ಮೃತಪಟ್ಟ ಘಟನೆ ಬಿಹಾರದ ಪೂರ್ಣಿಯಾ ಜಿಲ್ಲೆಯಲ್ಲಿ ಶುಕ್ರವಾರ ನಡೆದಿದೆ. ಘಟನೆಯಲ್ಲಿ ಮತ್ತೋರ್ವ ಗಂಭೀರವಾಗಿ ಗಾಯಗೊಂಡಿದ್ದಾನೆ.
14-18 ವರ್ಷ ವಯಸ್ಸಿನ ಯುವಕರ ಗುಂಪು ಮುಂಜಾನೆ 4 ಗಂಟೆ ಸುಮಾರಿಗೆ ಹಳಿ ದಾಟುತ್ತಿದ್ದರು. ಕತ್ತಲೆ ಜತೆಗೆ ಮೋಡ ಕವಿದ ವಾತಾವರಣವಿದ್ದ ಕಾರಣ ಅವರಿಗೆ ವೇಗವಾಗಿ ಬಂದ ರೈಲು ಕಂಡುಬಂದಿಲ್ಲ ಎನ್ನಲಾಗಿದೆ.
Next Story