BBK12: ಈ ಸೀಸನ್ನ ಮೊದಲ ಫಿನಾಲಿಸ್ಟ್ ಆದ ಕಾಕ್ರೋಚ್ ಸುಧಿ
ಬೆಂಗಳೂರು: ಬಿಗ್ ಬಾಸ್ ಮನೆಯಲ್ಲಿ ಈ ಬಾರಿ ಎರಡು ಫಿನಾಲೆ ನಡೆಯಲಿದೆ. ಮೊದಲ ಫಿನಾಲಿಸ್ಟ್ ಆಗಿ ಒಬ್ಬರು ಆಯ್ಕೆ ಆಗಿದ್ದಾರೆ.
ಫಿನಾಲೆಗಾಗಿ ಬಿಗ್ ಬಾಸ್ ವಿವಿಧ ಟಾಸ್ಕ್ ಗಳನ್ನು ನೀಡಿದ್ದಾರೆ. ಸ್ಪರ್ಧಿಗಳು ತಮ್ಮ ಪರ ಫಿನಾಲೆ ಟಾಸ್ಕ್ ಆಡೋಕೆ ಒಬ್ಬರನ್ನು ಆಯ್ಕೆ ಮಾಡಬಕು. ಈ ಪೈಕಿ ಸುಧಿ ಅವರು ಮಾಳು ನಿಪನಾಳ ಅವರು ಟಾಸ್ಕ್ ಆಡಿದ್ದಾರೆ.
ಮಾಳು ಮೂರು ಸುತ್ತಿನ ಟಾಸ್ಕ್ ನಲ್ಲಿ ಗೆದ್ದಿದ್ದು, ಕಾಕ್ರೋಚ್ ಸುಧಿ ಅವರು ಮೊದಲ ಫಿನಾಲಿಸ್ಟ್ ಆಗಿ ತೇರ್ಗಡೆ ಆಗಿದ್ದಾರೆ.
ನಾಮಿನೇಟ್ ಆದವರು ಯಾರೆಲ್ಲ?:
ಇನ್ನು ಈ ಸೀಸನ್ನ ಮೊದಲ ನಾಮಿನೇಷನ್ ಪ್ರಕ್ರಿಯೆ ಜೋರಾಗಿಯೇ ನಡೆದಿದೆ. ಸ್ಪರ್ಧಿಗಳು ಒಂಟಿ ಜಂಟಿಯಲ್ಲಿ ಕೆಲವರನ್ನು ನಾಮಿನೇಟ್ ಮಾಡಿದ್ದಾರೆ.
ಧನುಷ್, ಮಲ್ಲಮ್ಮ, ಗಿಲ್ಲಿ, ಕಾವ್ಯ, ಅಶ್ವಿನ, ಅಭಿಷೇಕ್, ಅಮಿತ್ ಕರಿಬಸಪ್ಪ ನಾಮಿನೇಟ್ ಆಗಿದ್ದಾರೆ.
ಇನ್ನು ಮೊದಲ ಫಿನಾಲಿಸ್ಟ್ ಆಗಿರುವ ಸುಧಿ ಅವರು ನೇರವಾಗಿ ಮಲ್ಲಮ್ಮ ಅವರನ್ನು ನಾಮಿನೇಟ್ ಮಾಡಿದ್ದಾರೆ. ಮಲ್ಲಮ್ಮ ಅವರಿಗೆ ಆಟ ಅರ್ಥ ಆಗ್ತಾ ಇಲ್ಲ ಎನ್ನುವ ಕಾರಣವನ್ನು ನೀಡಿ ಸುಧಿ ನಾಮಿನೇಟ್ ಮಾಡಿದ್ದಾರೆ.
ಮೊದಲ ವಾರದ ನಾಮಿನೇಷನ್ ಬಳಿಕ ದೊಡ್ಮನೆಯಲ್ಲಿ ಕೆಲವರಲ್ಲಿ ಬಿರುಕು, ಕೆಲವರಲ್ಲಿ ಆತ್ಮೀಯತೆ ಇನ್ನು ಕೆಲವರಲ್ಲಿ ಗೊಂದಲ ಮೂಡಿದೆ.