ಅಮೆರಿಕ ಸುಂಕಾಸ್ತ್ರದ ಮಧ್ಯೆಯೂ ಭಾರತದ ಆರ್ಥಿಕತೆ ಸದೃಢವಾಗಿದೆ: ಸಚಿವೆ ನಿರ್ಮಲಾ ಸೀತಾರಾಮನ್

Hero Image
Newspoint
ಹೊಸದಿಲ್ಲಿ: ಟ್ರಂಪ್ ಆಡಳಿತವು ಭಾರತದ ಸರಕುಗಳ ಮೇಲೆ ಆರಂಭದಲ್ಲಿ ಶೇ. 25 ರಷ್ಟು ಮತ್ತು ನಂತರ ಹೆಚ್ಚುವರಿಯಾಗಿ ಶೇ. 25 ರಷ್ಟು ಸುಂಕ ವಿಧಿಸಿತ್ತು. ಒಟ್ಟು ಸುಂಕದ ಪ್ರಮಾಣ ಶೇ.50 ರಷ್ಟಿದೆ. ಇದು ಅಮೆರಿಕದ ಅತಿ ಹೆಚ್ಚು ವ್ಯಾಪಾರ ಪಾಲುದಾರ ದೇಶಗಳ ಪೈಕಿ ಭಾರತದ ಮೇಲೆ ವಿಧಿಸಿರುವ ಅತಿ ಹೆಚ್ಚಿನ ಸುಂಕಗಳಲ್ಲಿ ಒಂದಾಗಿದೆ. ಈ ಎಲ್ಲ ಅಡೆತಡೆಗಳ ಜೊತೆಗೆ ಭಾರತದ ಆರ್ಥಿಕತೆ ಸದೃಢವಾಗಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದರು.

ಕೌಟಿಲ್ಯ ಆರ್ಥಿಕ ಸಮಾವೇಶದ 4ನೇ ಆವೃತ್ತಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಭಾರತಕ್ಕೆ ಎಂತದ್ದೇ ಆದ ಆಘಾತ, ವ್ಯಾಪಾರ ಆರ್ಥಿಕ ಬಿಕ್ಕಟ್ಟು ತಡೆದುಕೊಳ್ಳುವ ಶಕ್ತಿ ಹೆಚ್ಚಿದೆ. ಎಲ್ಲದರ ಮಧ್ಯೆ ಆರ್ಥಿಕ ಶಕ್ತಿ ಇನ್ನಷ್ಟು ಬೆಳೆಯುವ ಸಾಮರ್ಥ್ಯವೂ ಇದೆ. ನಾವು ತೆಗೆದುಕೊಳ್ಳುವ ನಿರ್ಧಾರಗಳು, ನಮ್ಮ ಸ್ಥಿತಿಸ್ಥಾಪಕತ್ವವು, ನಾಯಕತ್ವಕ್ಕೆ ಅಡಿಪಾಯವಾಗುತ್ತದೆಯೇ ಅಥವಾ ಕೇವಲ ಅನಿಶ್ಚಿತತೆಯಿಂದ ರಕ್ಷಿಸುತ್ತದೆಯೇ ಎಂಬುದನ್ನು ನಿರ್ಧರಿಸುತ್ತವೆ. ಟ್ರಂಪ್‌ ಸರ್ಕಾರದ ಶೇ.50 ಸುಂಕಗಳ ನಡುವೆಯೂ ಭಾರತ ಆರ್ಥಿಕವಾಗಿ ಸದೃಢವಾಗಿದೆ. ನಾವು ಶೇಕಡಾ 8 ರಷ್ಟು ಜಿಡಿಪಿ ಬೆಳವಣಿಗೆಗೆ ಶ್ರಮಿಸಬೇಕು ಎಂದು ಹೇಳಿದರು. ( 2038ರಲ್ಲಿ ಅಮೆರಿಕವನ್ನು ಹಿಂದಿಕ್ಕಲಿದೆ)

ಜಾಗತಿಕ ಆರ್ಥಿಕತೆಯಲ್ಲಿ ಭಾರತದ ಕುಣಿತ! ದಶಕದಲ್ಲಿ ಇಂಡಿಯಾ ಜಿಡಿಪಿ ಡಬಲ್! ಶೀಘ್ರದಲ್ಲೇ ಜಪಾನ್, ಜರ್ಮನಿಯನ್ನು ಹಿಂದಿಕ್ಕಲಿದೆ ದೇಶ!

2047 ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡಲು, ದೇಶವು ನಿರಂತರವಾಗಿ ಶೇಕಡಾ 8 ರಷ್ಟು ಆರ್ಥಿಕ ಬೆಳವಣಿಗೆ ಸಾಧಿಸಬೇಕು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನಿಗದಿಪಡಿಸಿದ 'ವಿಕಸಿತ ಭಾರತ' ಗುರಿ ಸಾಧಿಸಲು 'ಆತ್ಮನಿರ್ಭರ' ನೀತಿಯನ್ನು ಭಾರತ ಅನುಸರಿಸುತ್ತಿದೆ ಎಂದು ಸಚಿವರು ವಿವರಿಸಿದರು.

ಶೇ. 8ರ ಜಿಡಿಪಿ ಬೆಳವಣಿಗೆಯ ಗುರಿ2047ರ ವೇಳೆಗೆ 'ವಿಕಸಿತ ಭಾರತ್' (ಅಭಿವೃದ್ಧಿ ಹೊಂದಿದ ಭಾರತ) ಆಗುವ ಗುರಿ ಸಾಧಿಸಲು ದೇಶವು ಶೇ. 8ರಷ್ಟು ಜಿಡಿಪಿ ಬೆಳವಣಿಗೆ ದರವನ್ನು ಸಾಧಿಸಬೇಕಾಗಿದೆ. ಇದಕ್ಕಾಗಿ ಆತ್ಮ ನಿರ್ಭರತೆ ಎಂದರೆ ನಮ್ಮ ಆಂತರಿಕ ಸಾಮರ್ಥ್ಯವನ್ನು ಬಳಸಿ, ಭಾರತದ ಬೆಳವಣಿಗೆಗಾಗಿ ದುಡಿಯಬೇಕಾಗಿದೆ. ಇದು ಬೇರೆ ಬೇರೆ ಕಡೆಗಳಿಂದ ಆರ್ಥಿಕ ಸ್ಥಿತಿಗತಿ ಮೇಲೆ ಉಂಟಾಗುವ ಪರಿಣಾಮವನ್ನು ಕಡಿತಗೊಳಿಸುತ್ತದೆ ಎಂದರು.

ಬಿಕ್ಕಟ್ಟಿನಿಂದ ಹೊಸತು ಶುರುಇತಿಹಾಸವನ್ನು ಗಮನಿಸಿದರೆ, ಪ್ರತಿ ಬಿಕ್ಕಟ್ಟಿನ ನಂತರ ಹೊಸತು ಶುರುವಾಗುತ್ತದೆ. ಹಾಗೆಯೇ ಭಾರತದ ಆರ್ಥಿಕತೆಯು ಈ ಅನಿಶ್ಚಿತತೆಯನ್ನು ಅವಕಾಶವಾಗಿ ಪರಿವರ್ತಿಸುವ ಸಾಮರ್ಥ್ಯವನ್ನು ಹೊಂದಿದೆ. ಜಾಗತಿಕವಾಗಿ ರಾಜಕೀಯ ಸಂಘರ್ಷ, ಸುಂಕ ಏರಿಕೆ, ವ್ಯಾಪಾರ ವಹಿವಾಟಿನಲ್ಲಿ ಬಿಕ್ಕಟ್ಟು ಇದೆ. ಇಂತಹ ಪರಿಸ್ಥಿತಿಯಲ್ಲಿ ಭಾರತವು ಕೇವಲ ಮೂಕ ಪ್ರೇಕ್ಷಕನಾಗಿ ಉಳಿಯಲು ಸಾಧ್ಯವಿಲ್ಲ. ಭಾರತವು ಈ ಬದಲಾವಣೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು, ಸಾಧ್ಯವಾದಗಲೆಲ್ಲಾ ಫಲಿತಾಂಶಗಳನ್ನು ರೂಪಿಸಬೇಕು ಮತ್ತು ಅಗತ್ಯವಿರುವಲ್ಲಿ ತನ್ನ ಸ್ವಾಯತ್ತತೆಯನ್ನು ಕಾಪಾಡಿಕೊಳ್ಳಬೇಕು ಎಂದು ನಿರ್ಮಲಾ ಸೀತಾರಾಮನ್ ಕರೆ ನೀಡಿದರು.