IND Vs WI Test- ಚೊಚ್ಚಲ ಶತಕದಲ್ಲೇ ಎಂಎಸ್ ಧೋನಿ, ಫಾರೂಕ್ ಇಂಜಿನಿಯರ್ ಸಾಲಿಗೆ ಸೇರಿದ ಧ್ರುವ್ ಜ್ಯುರೆಲ್!

Hero Image
Newspoint
ಟೆಸ್ಟ್ ಕ್ರಿಕೆಟ್ ನಲ್ಲಿ ಚೊಚ್ಚಲ ಶತಕ ಬಾರಿಸಿದ ಧ್ರುವ್ ಜ್ಯುರೆಲ್ ಅವರು ಇದೀಗ ಇದೀಗ ಟೀಂ ಇಂಡಿಯಾ ಮಾಜಿ ವಿಕೆಟ್ ಕೀಪರ್ ಗಳಾದ ಮಹೇಂದ್ರ ಸಿಂಗ್ ಧೋನಿ ಮತ್ತು ಫಾರೂಕ್ ಇಂಜನಿಯರ್ ಅವರ ಸಾಲಿಗೆ ಸೇರಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧ ತವರು ನೆಲದಲ್ಲಿ ಶತಕ ಬಾರಿಸಿದ ಮೂರನೇ ವಿಕೆಟ್ ಕೀಪರ್ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಅಹಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪ್ರಥಮ ಟೆಸ್ಟ್ ಪಂದ್ಯದಲ್ಲಿ 125 ರನ್ ಬಾರಿಸಿದ ಅವರು 125 ನನ್ ಗಳಿಸಿ ಔಟಾಗುವ ಹೊತ್ತಿಗೆ ಭಾರತ ತಂಡವನ್ನು ಸುಭದ್ರ ಸ್ಥಿತಿಗೆ ತಲುಪಿಸಿದರು. ರವೀಂದ್ರ ಜಡೇಜಾ ಅವರೊಂದಿಗೆ 5ನೇ ವಿಕೆಟ್ ಗೆ ಅಮೋಘ 204 ರನ್ ಗಳ ಜೊತೆಯಾಟವಾಡಿದರು. ಅಂತಿಮವಾಗಿ 210 ಎಸೆತಗಳನ್ನು ಎದುರಿಸಿದ ಧ್ರುವ್ 15 ಬೌಂಡರಿ ಮತ್ತು 3 ಸಿಕ್ಸರ್ ಗಳನ್ನು ಒಳಗೊಂಡ 125 ರನ್ ಗಳಿಸಿ ಪಿಯರ್ ಬೌಲಿಂಗ್ ನಲ್ಲಿ ಕೀಪರ್ ಹೋಪ್ ಗೆ ಕ್ಯಾಚಿತ್ತು ಔಟಾದರು. ಅವರು ಔಟಾದ ಬಳಿಕ ರವೀಂದ್ರ ಜಡೇಜಾ (ಅಜೇಯ 104) ಅವರು ಸಹ ಶತಕ ಪೂರೈಸಿದರು.

ವೃತ್ತಿಪರ ಜೀವನದ ಮೊದಲ ಶತಕನಾಯಕ ಶುಭಮನ್ ಗಿಲ್ ಅವರು 188 ರನ್ ಗಳಿಸಿದ್ದ ವೇಳೆ ಔಟಾದರು. ಈ ವೇಳೆ ಕ್ರೀಸಿಗೆ ಆಗಮಿಸಿದ ಧ್ರುವ ಜ್ಯುರೆಲ್ ಅವರು ಕೆಎಲ್ ರಾಹುಲ್ ಅವರ ಜೊತೆ ತಾಳ್ಮೆಯ ಆಟವಾಡಿದರು. ಭರ್ತಿ 100 ರನ್ ಗಳಿಸಿದ ಬಳಿಕ ಕೆಎಲ್ ರಾಹುಲ್ ಅವರು ವಾರಿಕನ್ ಬೌಲಿಂಗ್ ನಲ್ಲಿ ಗ್ರೀವ್ಸ್ ಗೆ ಕ್ಯಾಚ್ ನೀಡಿ ಔಟಾದರು. ಈ ಬಳಿಕ ಧ್ರುವ್ ಜ್ಯುರೆಲ್ ಮತ್ತು ರವೀಂದ್ರ ಜಡೇಜಾ ಅವರು ತಂಡವನ್ನು ಬೃಹತ್ ಮೊತ್ತದತ್ತ ಕೊಂಡೊಯ್ದರು. ಯಾವಾಗಲೂ ಪಂತ್ ಬದಲಿಯಾಗಿ ಆಡುತ್ತಿದ್ದ ಅವರು ಇದೀಗ ತಮ್ಮ ಚೊಚ್ಚಲ ಅಂತಾರಾಷ್ಟ್ರೀಯ ಶತಕವನ್ನು 190 ಎಸೆತಗಳಲ್ಲಿ ಪೂರೈಸಿದರು. ಇದು ಅವರ ವೃತ್ತಿಜೀವನದ ಮೊದಲ ಅಂತರರಾಷ್ಟ್ರೀಯ ಶತಕವಾಗಿದೆ. ಈ ಸಾಧನೆಯ ಮೂಲಕ ಭಾರತೀಯ ಕ್ರಿಕೆಟ್‌ನಲ್ಲಿ ಅವರ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ.

ಮಾಜಿ ಭಾರತ ನಾಯಕ ಧೋನಿ ಅವರು 2011 ರಲ್ಲಿ ಕೋಲ್ಕತ್ತಾ ಟೆಸ್ಟ್‌ನಲ್ಲಿ 144 ರನ್ ಗಳಿಸಿದ್ದರು. ಅದೇ ರೀತಿ ಮಾಜಿ ವಿಕೆಟ್‌ಕೀಪರ್ ಫಾರೂಕ್ ಇಂಜಿನಿಯರ್ ಅವರು ಅವರು 1967 ರಲ್ಲಿ ಚೆನ್ನೈ ಟೆಸ್ಟ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 109 ರನ್ ಗಳಿಸಿದ್ದರು. ಈಗ ಧ್ರುವ್ ಜುರೆಲ್ ಈ ಇಬ್ಬರು ಶ್ರೇಷ್ಠ ಆಟಗಾರರ ಸಾಲಿಗೆ ಸೇರಿಕೊಂಡಿದ್ದಾರೆ.

ಶತಕ ಗಳಿಸಿದ 12ನೇ ಕೀಪರ್ಉತ್ತರ ಪ್ರದೇಶ ಮೂಲದ ಜುರೆಲ್ ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ ಶತಕ ಗಳಿಸಿದ ಭಾರತದ 12ನೇ ವಿಕೆಟ್‌ಕೀಪರ್ ಬ್ಯಾಟರ್ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ. ಅಲ್ಲದೆ, ವೆಸ್ಟ್ ಇಂಡೀಸ್ ವಿರುದ್ಧ ತಮ್ಮ ಚೊಚ್ಚಲ ಟೆಸ್ಟ್ ಶತಕವನ್ನು ಗಳಿಸಿದ ಐದನೇ ಆಟಗಾರರೆನ್ನಿಸಿಕೊಂಡಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧ ಚೊಚ್ಚಲ ಟೆಸ್ಟ್ ಶತಕ ಗಳಿಸಿದ ಭಾರತೀಯರು ಇವರು.
  • ವಿಜಯ್ ಮಂಜ್ರೇಕರ್
  • ಫಾರೂಖ್ ಇಂಜಿನಿಯರ್
  • ಅಜಯ್ ರಾತ್ರಾ
  • ವೃದ್ಧಿಮಾನ್ ಸಹಾ
  • ಧ್ರುವ್ ಜುರೆಲ್
  • ಸಂಕ್ಷಿಪ್ತ ಸ್ಕೋರ್
    • ವೆಸ್ಟ್ ಇಂಡೀಸ್ ಇನ್ನಿಂಗ್ಸ್ 162/10, ಜಸ್ಟಿನ್ ಗ್ರೀವ್ಸ್ 32, ಶಾಯ್ ಹೋಪ್ 26, ರೋಸ್ಟನ್ ಚೇಸ್ 24, ಸಿರಾಜ್ 40ಕ್ಕೆ 4, ಬುಮ್ರಾ 42ಕ್ಕೆ 3.
    • ಭಾರತ ಪ್ರಥಮ ಇನ್ನಿಂಗ್ಸ್ 448/5, ಕೆಎಲ್ ರಾಹುಲ್ 100, ಧ್ಪುವ್ ಜ್ಯುರೆಲ್ 125, ರವೀಂದ್ರ ಜಡೇಜಾ ಅಜೇಯ 104 , ಗಿಲ್ 50, ವಾಶಿಂಗ್ಟನ್ ಸುಂದರ್ 9 ನಾಟೌಟ್, ರೋಸ್ಟನ್ ಚೇಸ್ 90ಕ್ಕೆ 2.