'ಪ್ರತಿಯೊಂದು ಕ್ಷಣವನ್ನು ಪ್ರೀತಿಸಿದ್ದೇನೆ': ಆರ್ಸಿಬಿ ಫ್ಯಾನ್ಸ್ಗೆ ವಿಲ್ ಜ್ಯಾಕ್ಸ್ ವಿಶೇಷ ಸಂದೇಶ!

Hero Image
ಹೊಸದಿಲ್ಲಿ: ಪಾಕಿಸ್ತಾನ ವಿರುದ್ದ ಟಿ20 ಸರಣಿ ಆಡಲು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಬ್ಯಾಟ್ಸ್‌ಮನ್ ವಿಲ್ ಜ್ಯಾಲ್ಸ್‌ ಇಂಗ್ಲೆಂಡ್‌ ತೆರಳುತ್ತಿದ್ದು, ತಮ್ಮ ಆರ್‌ಸಿಬಿ ಅಭಿಮಾನಿಗಳನ್ನು ಮುಕ್ತಕಂಠದಿಂದ ಗುಣಗಾಣ ಮಾಡಿದ್ದಾರೆ ಹಾಗೂ ಐಪಿಎಲ್‌ ಟೂರ್ನಿಯಲ್ಲಿನ ಪ್ರತಿಯೊಂದು ಕ್ಷಣವನ್ನು ಪ್ರೀತಿಸಿದ್ದೇನೆಂದು ಹೇಳಿದ್ದಾರೆ.2024ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಗೂ ಮುನ್ನ ಇಂಗ್ಲೆಂಡ್‌ ಹಾಗೂ ಪಾಕಿಸ್ತಾನ ತಂಡಗಳು ಟಿ20 ಸರಣಿಯಲ್ಲಿ ಕಾದಾಟ ನಡೆಸಲಿವೆ. ಈ ಹಿನ್ನೆಲೆಯಲ್ಲಿ ಐಪಿಎಲ್‌ ಟೂರ್ನಿಯಲ್ಲಿ ಆಡುತ್ತಿರುವ ಎಲ್ಲಾ ಇಂಗ್ಲೆಂಡ್‌ ಆಟಗಾರರು ಇಂಗ್ಲೆಂಡ್‌ ಮರಳಿದ್ದಾರೆ. ಜೋಸ್‌ ಬಟ್ಲರ್‌, ಲಿಯಾಮ್‌ ಲಿವಿಂಗ್‌ಸ್ಟೋನ್‌, ವಿಲ್‌ ಜ್ಯಾಕ್ಸ್‌, ರೀಸ್‌ ಟಾಪ್ಲೀ, ಸ್ಯಾಮ್‌ ಕರನ್‌, ಜಾನಿ ಬೈರ್‌ಸ್ಟೋವ್‌ ಸೇರಿದಂತೆ ಆಂಗ್ಲರ ತವರಿನತ್ತ ಮುಖ ಮಾಡಿದ್ದಾರೆ. ಮೇ 22 ರಂದು ಪಾಕ್‌ ಎದುರು ಇಂಗ್ಲೆಂಡ್‌ ಟಿ20 ಸರಣಿ ಆಡಲಿದೆ. ವಿಲ್‌ ಜ್ಯಾಕ್ಸ್‌ ವಿಶೇಷ ಸಂದೇಶತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ವಿಲ್‌ ಜ್ಯಾಕ್ಸ್‌, "ತನ್ನ ಮೊದಲ ಐಪಿಎಲ್‌ ಟೂರ್ನಿಯಲ್ಲಿನ ಪ್ರತಿಯೊಂದು ಕ್ಷಣವನ್ನು ನಾನು ಪ್ರೀತಿಸಿದ್ದೇನೆ. ಆರ್‌ಸಿಬಿ ತಂಡದ ಪ್ರತಿಯೊಬ್ಬರಿಗೂ ನನ್ನ ಕಡೆಯಿಂದ ದೊಡ್ಡ ಧನ್ಯವಾದ. ಆರ್‌ಸಿಬಿ ಅಭಿಮಾನಿಗಳು ನಿಜಕ್ಕೂ ಅದ್ಭುತ," ಎಂದು ತಾವು ಹಂಚಿಕೊಂಡಿರುವ ಫೋಟೋಗೆ ಈ ರೀತಿಯ ಶೀರ್ಷಿಕೆ ಬರೆದಿದ್ದಾರೆ.
230 ರನ್ ಕಲೆ ಹಾಕಿರುವ ವಿಲ್‌ ಜ್ಯಾಕ್ಸ್‌ಆರ್‌ಸಿಬಿ ಪರ 2024ರ ಐಪಿಎಲ್‌ ಟೂರ್ನಿಯಲ್ಲಿ 8 ಪಂದ್ಯಗಳನ್ನು ಆಡಿರುವ ವಿಲ್‌ ಜ್ಯಾಕ್ಸ್ 32.85ರ ಸರಾಸರಿ ಹಾಗೂ 175ರ ಸ್ಟ್ರೈಕ್‌ ರೇಟ್‌ನಲ್ಲಿ 230 ರನ್‌ಗಳನ್ನು ಕಲೆ ಹಾಕಿದ್ದಾರೆ. ಇದರಲ್ಲಿ ಒಂದು ಅರ್ಧಶತಕ ಹಾಗೂ ಒಂದು ಶತಕವನ್ನು ಸಿಡಿಸಿದ್ದಾರೆ. ಇವರ ವೈಯಕ್ತಿಕ ಗರಿಷ್ಠ ಮೊತ್ತ 100 ರನ್‌ಗಳು. ಇವರು ಬೌಲಿಂಗ್‌ನಲ್ಲಿಯೂ ಎರಡು ವಿಕೆಟ್‌ ಕಿತ್ತಿದ್ದಾರೆ. 2023ರಲ್ಲಿಯೇ ಆರ್‌ಸಿಬಿ ಬಂದಿದ್ದ ವಿಲ್‌ ಜ್ಯಾಕ್ಸ್‌, ಗಾಯದಿಂದಾಗಿ ಆಡಲು ಸಾಧ್ಯವಾಗಿರಲಿಲ್ಲ. ಗುಜರಾತ್‌ ವಿರುದ್ಧ ಚೊಚ್ಚಲ ಶತಕಏಪ್ರಿಲ್‌ 28 ರಂದು ಗುಜರಾತ್‌ ಟೈಟನ್ಸ್ ವಿರುದ್ಧದ ಪಂದ್ಯದಲ್ಲಿ ವಿಲ್‌ ಜ್ಯಾಕ್ಸ್‌ ಶ್ರೇಷ್ಠ ಇನಿಂಗ್ಸ್ ಆಡಿದ್ದರು. ಜಿಟಿ ನೀಡಿದ್ದ 201 ರನ್‌ಗಳ ಗುರಿಯನ್ನು ಹಿಂಬಾಲಿಸಿದ್ದ ಆರ್‌ಸಿಬಿ ಪರ ವಿಲ್‌ ಜ್ಯಾಕ್ಸ್‌ 31 ಎಸೆತಗಳಲ್ಲಿ ಅರ್ಧಶತಕವನ್ನು ಪೂರ್ಣಗೊಳಿಸಿದ್ದರು. ಆದರೆ, ಮುಂದಿನ 50 ರನ್‌ಗಳನ್ನು ಕೇವಲ 10 ಎಸೆತಗಳಲ್ಲಿ ಸಿಡಿಸಿದ್ದರು. ಇದು ವಿಲ್‌ ಜ್ಯಾಕ್ಸ್‌ ಅವರ ಚೊಚ್ಚಲ ಶತಕವಾಗಿತ್ತು. ಈ ಪಂದ್ಯದಲ್ಲಿ 41 ಎಸೆತಗಳಲ್ಲಿ ಬಲಗೈ ಬ್ಯಾಟ್ಸ್‌ಮನ್‌ ಅಜೇಯ 100 ರನ್‌ ಸಿಡಿಸಿದ್ದರು. ಈ ಇನಿಂಗ್ಸ್‌ನಲ್ಲಿ ಅವರು ಬರೋಬ್ಬರಿ 10 ಸಿಕ್ಸರ್‌ ಹಾಗೂ 5 ಬೌಂಡರಿಗಳನ್ನು ಸಿಡಿಸಿದ್ದರು. ಇದರ ಜೊತೆಗೆ ವಿರಾಟ್‌ ಕೊಹ್ಲಿಯ ಜೊತೆ 166 ರನ್‌ಗಳ ಜೊತೆಯಾಟವನ್ನು ಆಡಿದ್ದರು. ಕೊಹ್ಲಿ 44 ಎಸೆತಗಳಲ್ಲಿ ಅಜೇಯ 70 ರನ್‌ ಸಿಡಿಸಿದ್ದರು. ಆ ಮೂಲಕ ಆರ್‌ಸಿಬಿ ಗೆಲುವು ಪಡೆದಿತ್ತು. ಐದನೇ ಸ್ಥಾನದಲ್ಲಿ ಆರ್‌ಸಿಬಿರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಟೂರ್ನಿಯ ಎರಡನೇ ಅವಧಿಯಲ್ಲಿ ಸತತ 5 ಪಂದ್ಯಗಳನ್ನು ಗೆಲ್ಲುವ ಮೂಲಕ ಭರ್ಜರಿಯಾಗಿ ಕಮ್‌ಬ್ಯಾಕ್ ಮಾಡಿದೆ. ಭಾನುವಾರ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ದದ ಪಂದ್ಯದಲ್ಲಿ ಆರ್‌ಸಿಬಿ 47 ರನ್‌ಗಳಿಂದ ಗೆಲುವು ಪಡೆದಿತ್ತು. ಆ ಮೂಲಕ ಟೂರ್ನಿಯ ಪಾಯಿಂಟ್ಸ್‌ ಟೇಬಲ್‌ನಲ್ಲಿ ಐದನೇ ಸ್ಥಾನವನ್ನು ಅಲಂಕರಿಸಿದೆ. ಆ ಮೂಲಕ ಪ್ಲೇಆಫ್‌ ರೇಸ್‌ನಲ್ಲಿ ಉಳಿದಿದೆ. ಅಂದ ಹಾಗೆ ಮೇ 18 ರಂದು ಆರ್‌ಸಿಬಿ ತನ್ನ ಲೀಗ್‌ನ ಕೊನೆಯ ಪಂದ್ಯದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ಎದುರು ಸೆಣಸಲಿದೆ. ಈ ಪಂದ್ಯ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ.